9 ಜನ ಲಿಂಗಾಯತ ನೌಕಕರಿಗೆ ಬಿಜೆಪಿ ಕಛೇರಿಯಿಂದ ಗೇಟ್ ಪಾಸ್!!

ಬಿಎಸ್‌ವೈ ಹಾಗೂ ನಳೀನ್ ಕುಮಾರ್ ಕಟೀಲ್ ನಡುವೆ ಎಲ್ಲವೂ ಸರಿ ಇಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಯಡಿಯೂರಪ್ಪನವರು ಅಧ್ಯಕ್ಷರಾಗಿದ್ದಾಗ ನೇಮಕವಾಗಿದ್ದ ಹಲವು ಕಾರ್ಯಕರ್ತರನ್ನು ಪ್ರತಿ ದಿನ ಒಬ್ಬೊಬ್ಬರಾಗಿ ತೆಗೆಯುತ್ತಿರುವುದು ರಾಜ್ಯ ಬಿಜೆಪಿಯಲ್ಲಿ ಎಲ್ಲವು ಸರಿಯಿಲ್ಲ ಎಂಬ ಮಾತು ಕೇಳಿಬರುತ್ತಿದೆ.

ಬಿ.ಎಸ್​. ಯಡಿಯೂರಪ್ಪ ಅವರನ್ನುಸೈಡ್‌ ಲೈನ್ ಮಾಡಲು ಎಲ್ಲಾ ರೀತಿ ಪ್ರಯತ್ನಗಳು ನಡೆಯುತ್ತಿವೆ ಎನ್ನುವ ಬಿಎಸ್‌ವೈ ಬೆಂಬಲಿಗರ ಮಾತುಗಳು ಎಲ್ಲೋ ಒಂದು ಕಡೆ ನಿಜವೇನೋ ಅನ್ನಿಸುತ್ತಿವೆ. ಯಾಕಂದ್ರೆ ಯಡಿಯೂರಪ್ಪ ಅವರನ್ನು ಹೈಕಮಾಂಡ್ ಮೊದಲಿನ ರೀತಿಯಲ್ಲಿ ಟ್ರೀಟ್ ಮಾಡುತ್ತಿಲ್ಲ.

ಯಡಿಯೂರಪ್ಪನವರ ಪ್ರಭಾವವನ್ನ ತಗ್ಗಿಸಲೇಬೆಕೇಂದು ನಳೀನ್ ಕುಮಾರ್ ಕಟೀಲ್ ಸಿದ್ದವಾದಂತೆ ಕಾಣಿಸುತ್ತಿದೆ. ನಿನ್ನೆ ನಂಜುಂಡಸ್ವಾಮಿ ಎನ್ನುವವರು ಒಂದು ವಿಡಿಯೋ ಮಾಡಿ ಅದರಲ್ಲಿ, ಲಿಂಗಾಯತರು ಬಿಜೆಪಿ ಕಛೇರಿಗೆ ಬರಬೇಡಿ ಎಂದು ಕಾರ್ಯಾಲಯ ಕಾರ್ಯದರ್ಶಿ ಜಗದೀಶ್ ಅಂಬೆಕಲ್ಲು ಹೇಳಿದ್ದಾರೆ ಎಂಬ ಸ್ಪೋಟಕ ಮಾಹಿತಿ ಹೊರಹಾಕಿದ್ದರು. ಅದು ಮಾಧ್ಯಮಗಳಲ್ಲಿ ಸಹ ವರದಿಯಾಗಿತ್ತು. ಅದರ ಮುಂದುವರಿದ ಭಾಗದಂತೆ ಇಂದು ಕಾರ್ಯಾಲಯದಲ್ಲಿ ಕೆಲಸ ಮಾಡುತ್ತಿದ್ದ 9 ಜನ ಲಿಂಗಾಯತ ನೌಕರರಿಗೆ ನಳೀನ್ ಕುಮಾರ್ ಕಟೀಲ್ ಗೇಟ್ ಪಾಸ್ ನೀಡಿದ್ದಾರೆ.

ಗಿರೀಶ್ - ಮೀಡಿಯಾ
ಗಿರೀಶ್ - ಫೋಟೋಗ್ರಾಫರ್
ಚಂದ್ರು - ವಿಡಿಯೋಗ್ರಾಫರ್
ಚೇತನ್ - ಡ್ರೈವರ್
ನಂಜುಂಡಸ್ವಾಮಿ - ಬಾಣಸೀಗ
ರವಿ ಎಚ್.ಎಸ್ -ಸಹಾಯಕ
ರವಿ - ಬಾಣಸಿಗ
ಸುರೇಶ್ - ಮಾಧ್ಯಮ

ಇವರನ್ನ ನಾಳೆಯಿಂದ ಕೆಲಸಕ್ಕೆ ಬರಬೇಡಿ ಎಂದು ಸೂಚಿಸಿದ್ದಾರೆ. ನಿಯಮದ ಪ್ರಕಾರ ಕೆಲಸದಿಂದ ತೆಗೆಯುವ ಮುನ್ನ 3 ತಿಂಗಳ ಸಂಬಳ, PF , ಫೈನಲ್ ಸೆಟಲ್ ಮೆಂಟ್ ಮಾಡಬೇಕು. ಆದರೇ ಈ ಯಾವ ನಿಯಮಗಳನ್ನು ಪಾಲಿಸಿಲ್ಲ, ಯಾವುದೇ ಕಾರಣ ನೀಡದೆ ಏಕಾಏಕಿ ಟಾರ್ಗೇಟ್ ಮಾಡಿ ಕೆಲಸದಿಂದ ತೆಗೆದು ಹಾಕಿರುವುದರ ಹಿಂದೆ ದೊಡ್ಡ ಷಡ್ಯಂತ್ರವಿದೆ ಎಂದು ಕೆಲಸ ಕಳೆದುಕೊಂಡವರು ಆಪಾದಿಸಿದ್ದಾರೆ. ಯಡಿಯೂರಪ್ಪನವರು ಕಛೇರಿಯಲ್ಲಿ ಲಿಂಗಾಯತ ನೌಕರರ ಮೇಲೆ ನಡೆಯುತ್ತಿರುವ ದೌರ್ಜನ್ಯದ ವಿರುದ್ದ ಧ್ವನಿ ಎತ್ತಬೇಕು, ಶೀಘ್ರದಲ್ಲಿಯೇ ಯಡಿಯೂರಪ್ಪನವರನ್ನು ಭೇಟಿ ಮಾಡಿ, ಕಛೇರಿಯಲ್ಲಿ ನಡೆಯುತ್ತಿರುವ ಜಾತಿ ರಾಜಕಾರಣದ ಬಗ್ಗೆ ದೂರು ಕೊಡುತ್ತೆವೆ ಎಂದು ಹೇಳಿದರು.

ಹಿಂದೂ ನಾವೆಲ್ಲಾ ಒಂದು ಎಂದು ಹೇಳಿಕೊಳ್ಳುವ ಬಿಜೆಪಿ ತನ್ನ ಕಛೇರಿಯಲ್ಲಿಯೇ ಇಂತಹ ಕೀಳು ಮಟ್ಟದ ಜಾತಿ ರಾಜಕಾರಣ ನಡೆಸುತ್ತಿರುವುದು ಮುಂದಿನ ದಿನಗಳಲ್ಲಿ ಯಡಿಯೂರಪ್ಪನವರನ್ನು ಮೂಲೆಗುಂಪು ಮಾಡುತ್ತದೆಯಾ ಎಂಬ ಪ್ರಶ್ನೆಗಳಿಗೆ ಆಹಾರ ಒದಗಿಸುತ್ತಿದೆ.

ಲಿಂಗಾಯತರು ಬಿಜೆಪಿ ಕಛೇರಿ ಬಳಿ ಬರಬೇಡಿ - BSY ಬಳಿಕ ಕಾರ್ಯಕರ್ತರಿಗೆ ಶಾಕ್ ಕೊಟ್ಟ ನಳೀನ್ ಕುಮಾರ್ ಕಟೀಲ್..?

ನಿಗಮ ಮಂಡಳಿಗೆ ಅಧ್ಯಕ್ಷರುಗಳ ನೇಮಕ - ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊ'ಡೆದ್ರಾ ಯಡಿಯೂರಪ್ಪ.??

ಬಿಜೆಪಿಗೆ ಸೇರ್ಪಡೆಯಾದ ಕುಸ್ತಿಪಟು ಯೋಗೇಶ್ವರ್ ದತ್, ಹರಿಯಾಣದಲ್ಲಿ ಮತ್ತೆ ಬಿಜೆಪಿ ?

ರಮೇಶ್ ಕುಮಾರ್ ಬಿಜೆಪಿಯವರ ಬಳಿ ದುಡ್ಡು ತಗೊಂಡು ನನ್ನ ವಿರುದ್ಧ ಕೆಲಸ ಮಾಡಿದ್ದಾನೆ.ನಾನು ನಿನ್ನ ನೋಡ್ಕೋತೀನಿ - ಸಿದ್ದುಗೆ ಗೆ ಗುದ್ದು- ಕೆಎಚ್ಎಂ