ನಿಗಮ ಮಂಡಳಿಗೆ ಅಧ್ಯಕ್ಷರುಗಳ ನೇಮಕ - ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊ'ಡೆದ್ರಾ ಯಡಿಯೂರಪ್ಪ.??

ಅನರ್ಹ ಶಾಸಕರ ಕ್ಷೇತ್ರಗಳಲ್ಲಿ ಉಂಟಾಗಿದ್ದ ಭಿನ್ನಮತ, ಬಂಡಾಯ ಬಹುತೇಕ ಶಮನವಾದಂತಿದೆ. ಇಂದು 8 ನಿಗಮ ಮಂಡಳಿಗಳಿಗೆ ಅಧ್ಯಕ್ಷ-ಉಪಾಧ್ಯಕ್ಷರನ್ನು ಮುಖ್ಯಮಂತ್ರಿ ಯಡಿಯೂರಪ್ಪ ಆದೇಶ ಹೊರಡಿಸಿದ್ದಾರೆ.

ಗೋಕಾಕ್ ವಿಧಾನಸಭಾ ಕ್ಷೇತ್ರದ ಅಶೋಕ್ ಪೂಜಾರಿ, ಕಾಗವಾಡದ ರಾಜು ಕಾಗೆ, ಹಿರೆಕೆರೂರಿನ ಯು.ಬಿ.ಬಣಕಾರ್, ಮಸ್ಕಿಯ ಬಸವನಗೌಡ ತುರ್ವಿಹಾಳ್, ಯಲ್ಲಾಪುರದ ವಿ.ಎಸ್.ಪಾಟೀಲ್, ಹೊಸಪೇಟೆಯ ಹೆಚ್.ಆರ್.ಗವಿಯಪ್ಪ, ಕೆ.ಆರ್.ಪುರಂನ ನಂದೀಶ್ ರೆಡ್ಡಿ, ಹೊಸಕೋಟೆಯ ಶರತ್ ಬಚ್ಚೇಗೌಡರಿಗೆ ವಿವಿಧ ನಿಗಮ ಮಂಡಳಿಗ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನ ನೀಡಿದ್ದಾರೆ.

ಅನರ್ಹ ಶಾಸಕರ ಕ್ಷೇತ್ರದ ಈ ಮಾಜಿ ಸ್ಪರ್ಧಾಕಾಂಕ್ಷಿಗಳು ಬಂಡಾಯ ಅಭ್ಯರ್ಥಿಗಳಾಗುತ್ತೆವೆ ಎಂಬ ಬೆದರಿಕೆ ಹಾಕಿದ್ದರು. ಹೊಸಕೋಟೆಯ ಶರತ್ ಬಚ್ಚೇಗೌಡ, ಕೆ.ಆರ್.ಪುರಂನ ನಂದೀಶ್ ರೆಡ್ಡಿ, ಹಿರೆಕೆರೂರಿನ ಬಣಕಾರ್, ಯಲ್ಲಾಪುರದ ವಿ.ಎಸ್.ಪಾಟೀಲ್ ದೆಹಲಿಗೆ ಹೋಗಿ ಬಿಜೆಪಿಯ ಟಿಕೇಟ್ ತರುತ್ತಾರೆ ಎಂಬ ವದಂತಿಗಳು ಹಬ್ಬಿದ್ದವು. ಅದರಲ್ಲೂ ಕೆ.ಆರ್.ಪುರಂನ ನಂದೀಶ್ ರೆಡ್ಡಿ, ಹೊಸಕೋಟೆಯ ಶರತ್ ಬಚ್ಚೇಗೌಡರೂ , ಯಡಿಯೂರಪ್ಪ ನಡೆಸಿದ ಸಂಧಾನಕ್ಕೆ ಮಣಿದಿರಲಿಲ್ಲ ಎಂದು ವರದಿಯಾಗಿತ್ತು. ಆದರೇ ಇವತ್ತು ನಿಗಮ ಮಂಡಳಿಗಳ ಅಧ್ಯಕ್ಷ, ರಾಜ್ಯ ದರ್ಜೆ ಸಚಿವ ಸ್ಥಾನಮಾನ ಹೊಂದಿದ್ದು, ಹಾಗಾಗಿ ಬಂಡಾಯವಾಗಿ ಸ್ಪರ್ಧಿಸುತ್ತೆವೆ ಎಂಬ ಬೆದರಿಕೆ ಹಾಕಿದ ಅಭ್ಯರ್ಥಿಗಳು ಸಂಧಾನಕ್ಕೆ ಮಣಿಯುವ ಸಾಧ್ಯತೆಯಿದೆ.

ಯಡಿಯೂರಪ್ಪ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ. ಅನರ್ಹರ ಕ್ಷೇತ್ರದಲ್ಲಿ ಕಾಂಗ್ರೇ‌ಸ್ ಅಭ್ಯರ್ಥಿಗಳ ಬರ ಎದುರಿಸುತ್ತಿತ್ತು. ಒಂದು ವೇಳೆ ಬಿಜೆಪಿಯಿಂದ ಕಳೆದ ಭಾರಿ ಪರಾಜಿತರಾಗಿದ್ದ ಅಭ್ಯರ್ಥಿಗಳು ಬಂಡಾಯವೆದ್ದರೇ, ಅವರ ಮನವೊಲಿಸಿ ಕಾಂಗ್ರೇಸ್ ನಿಂದ ಬಿ ಫಾರಂ ಕೊಡಲು ಚಿಂತಿಸಿತ್ತು. ಆದರೇ ಯಡಿಯೂರಪ್ಪನವರ ಈ ನಿರ್ಣಯದಿಂದ ಕಾಂಗ್ರೇಸ್ ಗೆ ಹಿನ್ನಡೆಯಾಗಿದೆ. ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನ ನೀಡಿದ ಕಾರಣ ಅಭ್ಯರ್ಥಿಗಳು ಪಕ್ಷ ನಿಷ್ಠರಾಗುವ ಸಾಧ್ಯತೆಯಿದೆ.

8 ಕ್ಷೇತ್ರಗಳು ಬಿಜೆಪಿಗೆ ಪೂರಕ ವಾತಾವರಣ ನಿರ್ಮಾಣವಾಗುವ ಸಾಧ್ಯತೆಯಿದೆ. ಯಡಿಯೂರಪ್ಪನವರ ರಾಜಕೀಯ ಅನುಭವ ಹಾಗೂ ನಂಬಿದವರ ಕೈ ಬಿಡದ ಸ್ವಭಾವಕ್ಕೆ ಮತ್ತೊಂದು ನಿದರ್ಶನ ದೊರೆತಂತಿದೆ.

9 ಜನ ಲಿಂಗಾಯತ ನೌಕಕರಿಗೆ ಬಿಜೆಪಿ ಕಛೇರಿಯಿಂದ ಗೇಟ್ ಪಾಸ್!!

ಲಿಂಗಾಯತರು ಬಿಜೆಪಿ ಕಛೇರಿ ಬಳಿ ಬರಬೇಡಿ - BSY ಬಳಿಕ ಕಾರ್ಯಕರ್ತರಿಗೆ ಶಾಕ್ ಕೊಟ್ಟ ನಳೀನ್ ಕುಮಾರ್ ಕಟೀಲ್..?

ಬಿಜೆಪಿಗೆ ಸೇರ್ಪಡೆಯಾದ ಕುಸ್ತಿಪಟು ಯೋಗೇಶ್ವರ್ ದತ್, ಹರಿಯಾಣದಲ್ಲಿ ಮತ್ತೆ ಬಿಜೆಪಿ ?

ರಮೇಶ್ ಕುಮಾರ್ ಬಿಜೆಪಿಯವರ ಬಳಿ ದುಡ್ಡು ತಗೊಂಡು ನನ್ನ ವಿರುದ್ಧ ಕೆಲಸ ಮಾಡಿದ್ದಾನೆ.ನಾನು ನಿನ್ನ ನೋಡ್ಕೋತೀನಿ - ಸಿದ್ದುಗೆ ಗೆ ಗುದ್ದು- ಕೆಎಚ್ಎಂ