ಎ'ಲ್ಐ'ಸಿ ನ'ಷ್ಟದ ಬ'ಗ್ಗೆ ಪ'ತ್ರಿ'ಕೆಗಳಲ್ಲಿ ಮಾಡಿರುವ ವ'ರ'ದಿಗಳಲ್ಲಿ ಹು'ರುಳಿ'ದೆಯೇ..?

ಎಲ್ಐಸಿ ಯ 30 ಸಾವಿರ ಕೋಟಿ ಹಣ ನಷ್ಟವಾಗುವಂತೆ ಕೇಂದ್ರ ಸರ್ಕಾರ ಮಾಡಿದೆ, ಎಂದು ಹಲವು ಪತ್ರಿಕೆಗಳು ವರದಿಗಳನ್ನು ವರದಿ ಮಾಡಿವೆ. ಮೊದಲನೆಯದಾಗಿ ಈ ಪತ್ರಿಕೆಗಳಿಗೆ LIC ಯಾ ಕಾರ್ಯನಿರ್ವಹಣೆ ಬಗ್ಗೆ ಮಾಹಿತಿ ಇದೆಯೇ?? ಎಲ್ಐಸಿ ಕೇಂದ್ರ ಸರ್ಕಾರದ ಅಧೀನದ ಒಂದು ವಿಮೆ ಕಂಪನಿ. ಅದರ ಆಡಳಿತ ನಿರ್ವಹಣೆಯಲ್ಲಿ ಕೇಂದ್ರದ ಪಾತ್ರವಿರುವುದಿಲ್ಲ. ಎಲ್ಐಸಿ ಸಂಗ್ರಹಿಸುವ ವಿಮ ಹಣವನ್ನು ಶೇರು ಮಾರುಕಟ್ಟೆಯಲ್ಲಿ ಬಹಳಷ್ಟು ಹೂಡುತ್ತದೆ, ಅದರ ಜೊತೆಗೆ ಕೇಂದ್ರ ರಾಜ್ಯ ಸರ್ಕಾರದ ಹಲವು ಯೋಜನೆಗಳಿಗೆ ಸಾಲದ ರೂಪದಲ್ಲಿ ಹಣವನ್ನು ಕೊಡುತ್ತದೆ. ಶೇರು ಮಾರುಕಟ್ಟೆ ರಿಸ್ಕ್ ಆದಾರಿತ ಬಂಡವಾಳ ಹೂಡಿಕೆ ಎಂಬ ಕನಿಷ್ಠ ತಿಳುವಳಿಕೆಯೇ ಈ ವರದಿ ಮಾಡಿದ ಪತ್ರಿಕೆಗಳಿಗೆ ಇದ್ದಂತಿಲ್ಲ

ಎಲ್ಐಸಿ ತನ್ನ ಹಣವನ್ನು ಶೇರು ಮಾರುಕಟ್ಟೆಯಲ್ಲಿ ಹೂಡಲು ಒಂದು ತಜ್ಞರ ಸಮಿತಿ ರಚಿಸಿ, ಸಮಿತಿಯ ಶಿಪಾರಸ್ಸಿನ ಮೇಲೆ ನಿರ್ದೇಶಕರ ಒಪ್ಪಿಗೆ ನಂತರ ಆಯ್ದ ಕಂಪನಿಗಳಲ್ಲಿ ಹಣ ಹೂಡುವುದು. ಅದು ಸ್ವತಂತ್ರವಾಗಿ ಕಾರ್ಯ ನಿರ್ವಹಿಸುತ್ತದೆ.

ಇದರಲ್ಲಿ ಸರ್ಕಾರದ ಹಸ್ತಕ್ಷೇಪವಿರುವುದಿಲ್ಲ. ಎಲ್ಐಸಿ ಹಣ ಹೂಡಿರುವ ಕೇವಲ ಮೂರು ಕಂಪನಿ ಶೇರುಗಳಲ್ಲಿ ಬೆಲೆ ಕಡಿಮೆ ಆಗಿರುವುದರಿಂದ ಮೌಲ್ಯ ಕಳೆದುಕೊಂಡಿದೆಯೇ ಹೊರತು, ಅದು ಕೇಂದ್ರ ಸರ್ಕಾರದ ಶಿಪಾರಸ್ಸಿನಿಂದ ಅಲ್ಲ. ಬಂಡವಾಳ ಹೂಡುವ ಎಲ್ಲಾ ಕಂಪನಿಗಳ ಶೇರುಗಳು ಲಾಭವನ್ನು ತಂದುಕೊಡಲು ಸಾಧ್ಯವೇ?? ಎಂಬ ಕನಿಷ್ಠ ತಿಳುವಳಿಕೆಯೂ ಈ ಪತ್ರಿಕೆಗಳಿಗೆ ಇದ್ದಂತಿಲ್ಲ. ಎಲ್ಐಸಿ ಬಂಡವಾಳ ಹೂಡಿರುವ ಹಲವು ನೂರು ಕಂಪನಿಗಳು ನೀರಿಕ್ಷೆಗೂ ಮೀರಿ ಲಾಭ ತಂದು ಕೊಟ್ಟಿದೆ.

ಅದು ಕೇಂದ್ರ ಸರಕಾರದಿಂದ ಸಾಧ್ಯವಾದದ್ದು ಅಂತ ಹೇಳಲು ಸಾಧ್ಯವೇ?? ಅದಕ್ಕೂ ಕಾರಣ ಎಲ್ಐಸಿ ಯೇ ಹೊರತು ಕೇಂದ್ರ ಸರ್ಕಾರವಲ್ಲ. ಶೇರು ಮಾರುಕಟ್ಟೆಯಲ್ಲಿನ ಬಂಡವಾಳ ಹೂಡಿಕೆಯಲ್ಲಿ ಲಾಭ ನಷ್ಟಗಳು ಸಹಜ, ಆದರೆ ಎಲ್ಐಸಿ ಮಾತ್ರ ಊಹಿಸಲು ಅಸಾಧ್ಯವಾದಂತಹ ಲಾಭವನ್ನು ಶೇರುಗಳ ಖರೀದಿ ಮುಖಾಂತರ ಮಾಡಿದೆ. ಕೇವಲ ಮೂರು ಕಂಪನಿಗಳಲ್ಲಿನ ಹೂಡಿಕೆಯಲ್ಲಿ ಆಗಿರುವ ನಷ್ಟಕ್ಕೆ ಕೇಂದ್ರ ಸರ್ಕಾರ ಎನ್ನುವುದಾದರೆ, ಎಲ್ಐಸಿ ನೂರಾರು ಕಂಪನಿಗಳಲ್ಲಿ ಹೂಡಿಕೆ ಮಾಡಿ ಮಾಡಿರುವ ಲಾಭಕ್ಕೆ ಕೇಂದ್ರ ಸರ್ಕಾರ ಕಾರಣವೇ??

ಕನಿಷ್ಠ ತಿಳುವಳಿಕೆ ಇಲ್ಲದೆ ಪತ್ರಿಕೆಗಳು ಈ ವರದಿಯನ್ನು ಪೂರ್ವಗ್ರಹ ಪೀಡಿತವಾಗಿ ವರದಿ ಮಾಡಿವೆ. ಇದರಲಿ ಕೇಂದ್ರ ಸರ್ಕಾರದ ಪಾತ್ರ ಅಂತೂ ಖಂಡಿತ ಇಲ್ಲ.

ನಷ್ಟದಲ್ಲಿ ಮುಳುಗಿದ್ದ ಐಡಿಬಿಐ ಬ್ಯಾಂಕ್‌ನಲ್ಲಿ‡ನ ಹೆಚ್ಚಿನ ಷೇರುಗಳನ್ನು ಭಾರತೀಯ ಜೀವವಿಮಾ ನಿಗಮವು(ಎಲ್‌ಐಸಿ) ಖರೀದಿಸಿದ್ದು, ಬ್ಯಾಂಕ್‌ನ ಹೆಸರು ಬದಲಿಸುವ ಪ್ರಕ್ರಿಯೆಗೆ ಚಾಲನೆ ಸಿಕ್ಕಿತ್ತು. 'ಎಲ್‌ಐಸಿ ಐಡಿಬಿಐ ಬ್ಯಾಂಕ್‌' ಅಥವಾ 'ಎಲ್‌ಐಸಿ ಬ್ಯಾಂಕ್‌' ಎಂಬುದಾಗಿ ಹೆಸರು ಬದಲಿಸಲು ಐಡಿಬಿಐ ಬ್ಯಾಂಕ್‌ನ ಆಡಳಿತ ಮಂಡಳಿ ಕಳೆದ ತಿಂಗಳು ಪ್ರಸ್ತಾವನೆ ಸಿದ್ಧಪಡಿಸಿತ್ತು. ಆದರೆ, ಈ ಬಗ್ಗೆ ಆರ್‌ಬಿಐ ಒಲವು ತೋರಿಸಿಲ್ಲ. ಈ ವಿಷಯದಲ್ಲಿ ತಾಂತ್ರಿಕ ಸಮಸ್ಯೆಗಳಿವೆ ಎಂದು ಮೂಲಗಳು ತಿಳಿಸಿವೆ.

9 ಜನ ಲಿಂಗಾಯತ ನೌಕಕರಿಗೆ ಬಿಜೆಪಿ ಕಛೇರಿಯಿಂದ ಗೇಟ್ ಪಾಸ್!!

ಲಿಂಗಾಯತರು ಬಿಜೆಪಿ ಕಛೇರಿ ಬಳಿ ಬರಬೇಡಿ - BSY ಬಳಿಕ ಕಾರ್ಯಕರ್ತರಿಗೆ ಶಾಕ್ ಕೊಟ್ಟ ನಳೀನ್ ಕುಮಾರ್ ಕಟೀಲ್..?

ನಿಗಮ ಮಂಡಳಿಗೆ ಅಧ್ಯಕ್ಷರುಗಳ ನೇಮಕ - ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊ'ಡೆದ್ರಾ ಯಡಿಯೂರಪ್ಪ.??

ಬಿಜೆಪಿಗೆ ಸೇರ್ಪಡೆಯಾದ ಕುಸ್ತಿಪಟು ಯೋಗೇಶ್ವರ್ ದತ್, ಹರಿಯಾಣದಲ್ಲಿ ಮತ್ತೆ ಬಿಜೆಪಿ ?