ಬಿಜೆಪಿಯ ಕನಸು ಭಗ್ನಗೊಳಿಸಿದ ಕಾಂಗ್ರೆಸ್, ಆಪರೇಷನ್ ಕಾಂಗ್ರೆಸ್ ಸಕ್ಸಸ್ !

ರಾಜಸ್ಥಾನ ವಿಧಾನಸಭೆಯಲ್ಲಿ ಒಟ್ಟು 200 ಸದಸ್ಯಬಲವಿದೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸರಿಯಾಗಿ 100 ಸ್ಥಾನ ಗೆದ್ದಿತ್ತು. ಮಿತ್ರಪಕ್ಷಗಳಾದ ಆರ್​ಜೆಡಿ ಮತ್ತು ಬಿಟಿಪಿಯ ಮೂವರು ಶಾಸಕರ ಬೆಂಬಲದೊಂದಿಗೆ ಕಾಂಗ್ರೆಸ್ ಸರಳ ಬಹುಮತದೊಂದಿಗೆ ಅಧಿಕಾರ ಹಿಡಿಯಿತು. ಹಾಗೆಯೇ, 13 ಪಕ್ಷೇತರ ಶಾಸಕರ ಪೈಕಿ 12 ಮಂದಿಯು ಕಾಂಗ್ರೆಸ್​ಗೆ ಬಾಹ್ಯ ಬೆಂಬಲ ನೀಡಿದ್ದರು. ಬಿಎಸ್​ಪಿಯ 6 ಶಾಸಕರೂ ಕೂಡ ಬಾಹ್ಯ ಬೆಂಬಲ ನೀಡಿದ್ದರು. ಆ 12 ಪಕ್ಷೇತರರು ಕಾಂಗ್ರೆಸ್ ಸದಸ್ಯತ್ವ ಪಡೆದುಕೊಂಡು ಸರ್ಕಾರವನ್ನು ಬಲಪಡಿಸಿದ್ದರು. ಇದೀಗ ಬಿಎಸ್​ಪಿ ಶಾಸಕರ ಸೇರ್ಪಡೆಯಿಂದ ಗೆಹ್ಲೋಟ್ ಸರ್ಕಾರ ಇನ್ನಷ್ಟು ಬಲಗೊಂಡಂತಾಗಿದೆ. ಇದರೊಂದಿಗೆ ಕಾಂಗ್ರೆಸ್​ನ ಬಲ 118ಕ್ಕೆ ಏರಿದೆ. ಮೈತ್ರಿ ಸರ್ಕಾರದ ಬಲ 121ಕ್ಕೆ ಏರಿದಂತಾಗಿದೆ. ಬಿಜೆಪಿ ಆಪೆರೇಷನ್ ಕಮಲದ ಮೂಲಕ ಅಧಿಕಾರಕ್ಕೆ ಬರಬಹುದೆಂಬ ಸುದ್ದಿ ಹೊರಬಿದ್ದಿತ್ತು ಆದರೆ ಬಿಜೆಪಿ ಆಸೆ ನಿರಾಸೆಯಾಗಿದೆ.

ಇಷ್ಟು ದಿನ ಬಿಜೆಪಿ ಮೇಲೆ ಕಾಂಗ್ರೆಸ್ ವಾಗ್ದಾಳಿ ಮಾಡುತಿತ್ತು, ಆಪರೇಷನ್ ಕಮಲ ಪ್ರಜಾಪ್ರಭುತ್ವದ ವಿರೋಧಿ ನಡೆ ಎಂದು ಹೇಳಿತ್ತು, ಇನ್ನು ಮುಂದೆ ಕಾಂಗ್ರೆಸ್ ಏನು ಹೇಳುತ್ತದೆ ಕಾದು ನೋಡಬೇಕು.

ನಿನ್ನೆ ಮಂಗಳವಾರ ರಾತ್ರಿ ರಾಜಸ್ಥಾನದ ಎಲ್ಲಾ 6 ಶಾಸಕರು ತಮ್ಮ ಶಾಸಕಾಂಗ ಪಕ್ಷವನ್ನು ಕಾಂಗ್ರೆಸ್ ಜೊತೆ ವಿಲೀನ ಮಾಡಬೇಕೆಂದು ಸ್ಪೀಕರ್ ಅವರಿಗೆ ಪತ್ರ ಬರೆದಿದ್ದರು. ಇವತ್ತು ಅವರು ಕಾಂಗ್ರೆಸ್ ಪಾಳಯ ಸೇರಿಕೊಳ್ಳುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡರೊಬ್ಬರು ಸ್ಪಷ್ಟಪಡಿಸಿದ್ಧಾರೆ.

ರಾಜೇಂದ್ರ ಸಿಂಗ್ ಗುಧ, ಜೋಗೇಂದ್ರ ಸಿಂಗ್ ಅವಾನ, ವಾಜಿಬ್ ಅಲಿ, ಲಖನ್ ಸಿಂಗ್ ಮೀನಾ, ಸಂದೀಪ್ ಯಾದವ್ ಮತ್ತು ದೀಪಚಂದ್ ಅವರು ಕಾಂಗ್ರೆಸ್ ಸೇರಿರುವ ರಾಜಸ್ಥಾನದ ಬಿಎಸ್​ಪಿ ಶಾಸಕರಾಗಿದ್ದಾರೆ.

“ಸರಕಾರವನ್ನು ಬಲಪಡಿಸಲು, ರಾಜ್ಯದ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಲು ಹಾಗೂ ಕೋಮುವಾದಿ ಶಕ್ತಿಗಳ ವಿರುದ್ಧ ಹೋರಾಡಲು ನಾವು ಈ ನಿರ್ಧಾರ ತೆಗೆದುಕೊಂಡಿದ್ದೇವೆ. ಅಶೋಕ್ ಗೆಹ್ಲೋಟ್ ಅವರಿಗಿಂತ ಉತ್ತಮ ಮುಖ್ಯಮಂತ್ರಿ ರಾಜಸ್ಥಾನದಲ್ಲಿ ಬೇರೆ ಯಾರೂ ಇಲ್ಲ. ಅವರ ಕಾರ್ಯವೈಖರಿ ಮತ್ತು ಸೌಜನ್ಯತೆ ನಮಗೆ ಇಷ್ಟವಾಗಿದೆ” ಎಂದು ಬಿಎಸ್​ಪಿ ಶಾಸಕ ರಾಜೇಂದ್ರ ಗುಧ ಅವರು ಹೇಳಿದ್ದಾರೆಂದು ಎಎನ್​ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಮತ್ತೊಬ್ಬ ಬಿಎಸ್​ಪಿ ಶಾಸಕ ಜೋಗೇಂದ್ರ ಸಿಂಗ್ ಅವಾನಾ ಪ್ರಕಾರ, ಬಾಹ್ಯ ಬೆಂಬಲ ನೀಡುವ ಕಾರ್ಯ ಇರಿಸುಮುರು ಎನಿಸಿತ್ತು. ಅದಕ್ಕೆ ಕಾಂಗ್ರೆಸ್ ಜೊತೆ ವಿಲೀನ ಮಾಡಿಕೊಳ್ಳಲಾಯಿತಂತೆ.

ತನ್ನ ಕಡು ಎದುರಾಳಿಗಳೊಂದಿಗೆ ಹೋರಾಡುವುದನ್ನು ಬಿಟ್ಟು, ಕಾಂಗ್ರೆಸ್ ತನಗೆ ಬೆಂಬಲವಾಗಿ ನಿಂತಿರುವ ಪಕ್ಷಗಳಿಗೇ ಹಾನಿ ಮಾಡುತ್ತದೆ. ಇದರಿಂದ ಕಾಂಗ್ರೆಸ್ ಪಕ್ಷವು ದಲಿತರ, ಪರಿಶಿಷ್ಟ ವರ್ಗಗಳ ಹಾಗೂ ಹಿಂದುಳಿದ ವರ್ಗದವರ ವಿರುದ್ಧವಿರುವುದು ಹಾಗೂ ಹಿಂದುಳಿದವರ ಹಕ್ಕಿನ ಬಗ್ಗೆ ಅದಕ್ಕಿರುವ ನಿರ್ಲಕ್ಷ್ಯತೆ ಗೊತ್ತಾಗುತ್ತದೆ” ಎಂದು ಮಾಜಿ ಉತ್ತರ ಪ್ರದೇಶ ಮುಖ್ಯಮಂತ್ರಿ ಮಾಯಾವತಿ ದೂಷಿಸಿದ್ದಾರೆ.

9 ಜನ ಲಿಂಗಾಯತ ನೌಕಕರಿಗೆ ಬಿಜೆಪಿ ಕಛೇರಿಯಿಂದ ಗೇಟ್ ಪಾಸ್!!

ಲಿಂಗಾಯತರು ಬಿಜೆಪಿ ಕಛೇರಿ ಬಳಿ ಬರಬೇಡಿ - BSY ಬಳಿಕ ಕಾರ್ಯಕರ್ತರಿಗೆ ಶಾಕ್ ಕೊಟ್ಟ ನಳೀನ್ ಕುಮಾರ್ ಕಟೀಲ್..?

ನಿಗಮ ಮಂಡಳಿಗೆ ಅಧ್ಯಕ್ಷರುಗಳ ನೇಮಕ - ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊ'ಡೆದ್ರಾ ಯಡಿಯೂರಪ್ಪ.??

ಬಿಜೆಪಿಗೆ ಸೇರ್ಪಡೆಯಾದ ಕುಸ್ತಿಪಟು ಯೋಗೇಶ್ವರ್ ದತ್, ಹರಿಯಾಣದಲ್ಲಿ ಮತ್ತೆ ಬಿಜೆಪಿ ?