ಎಚ್ ಡಿ ರೇವಣ್ಣ ರಾಜಕೀಯ ಭವಿಷ್ಯಕ್ಕೆ ಕಂಟಕವಾಗುವ ಸಾಧ್ಯತೆ !

ಏಪ್ರಿಲ್ 18ರಂದು ನಡೆದ ಘಟನೆ. ಹಾಸನ ಲೋಕಸಭಾ ಚುನಾವಣಾ ಮತದಾನದ ದಿನ. ಹಾಸನದ ಪಡವಲಹಿಪ್ಪೆ ಮತಗಟ್ಟೆಗೆ ರೇವಣ್ಣ ಮತಹಾಕಲು ಬಂದಿದ್ದರು. ಆದರೆ, ಅಂದು ನೀತಿ ಸಂಹಿತೆಯನ್ನು ರೇವಣ್ಣ ಧಿಕ್ಕರಿಸಿದ್ದರು.ಚುನಾವಣಾ ನೀತಿ ಸಂಹಿತೆ ಪ್ರಕಾರ ಹೆಚ್ಚು ಹೊತ್ತು ಮತಗಟ್ಟೆಯಲ್ಲಿರುವಂತಿಲ್ಲ. ಎಷ್ಟೇ ದೊಡ್ಡ ವ್ಯಕ್ತಿಯಾದರೂ ಮತ ಹಾಕಿ ಹೊರನಡೆಯಬೇಕು. ಆದರೆ ಮತದಾನಕ್ಕೂ ಮುನ್ನಾ 18 ನಿಮಿಷ ಮತಗಟ್ಟೆಯಲ್ಲಿದ್ದರು. ರಾಹುಕಾಲ ಕಳೆದ ನಂತರ ಮತ ಹಾಕಿದ್ದ ಅವರು, 8 ನಿಮಿಷ ಮತಗಟ್ಟೆ ಒಳಗೇ ಕುಳಿತಿದ್ದರು.ಈ ದೃಶ್ಯವನ್ನು ಸೆರೆ ಹಿಡಿಯಲಾಗಿದೆ. ಈ ವಿಡಿಯೋ ನೋಡಿದ್ದ ಅಂದಿನ ಡಿ.ಸಿ ಐವರನ್ನು ಸಸ್ಪೆಂಡ್ ಮಾಡಿದ್ದರು. ಇದನ್ನೇ ಇಟ್ಟುಕೊಂಡು ವಕೀಲ ದೇವರಾಜಗೌಡ ಕೇಂದ್ರ ಚುನಾವಾಣಾ ಆಯೋಗಕ್ಕೆ ದಾಖಲೆ ಸಮೇತ ದೂರು ನೀಡಿದ್ದರು. ಇದನ್ನು ಆಧರಿಸಿ ಆಯೋಗ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದರು.

ಹೆಚ್.ಡಿ ರೇವಣ್ಣ ವಿರುದ್ಧ ಪ್ರಕರಣ ದಾಖಲಿಸುವಂತೆ ಕೇಂದ್ರ ಚುನಾವಣಾ ಆಯೋಗ ರಾಜ್ಯ ಆಯೋಗಕ್ಕೆ ಸೂಚನೆ ನೀಡಿತ್ತು. ರಾಜ್ಯ ಚುನಾವಣಾ ಆಯೋಗ ಈ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆ ಡಿಸಿಗೆ ಸೂಚನೆ ನೀಡಿತ್ತು ಸದ್ಯ, ಅಜಯ್ ನಾಗಭೂಷಣ್ 26 ನಿಮಿಷಗಳ ವಿಡಿಯೋ ತನಿಖೆಗೆ ಆದೇಶಿಸಿದ್ದಾರೆ. ವಿಡಿಯೋ ಸತ್ಯಾಸತ್ಯತೆ ಸಾಬೀತಾದರೆ ರೇವಣ್ಣ ಮೇಲೆ ಶೀಘ್ರದಲ್ಲೇ ಎಫ್​ಐಆರ್ ದಾಖಲಾಗುವ ಸಾಧ್ಯತೆ ಇದೆ.

9 ಜನ ಲಿಂಗಾಯತ ನೌಕಕರಿಗೆ ಬಿಜೆಪಿ ಕಛೇರಿಯಿಂದ ಗೇಟ್ ಪಾಸ್!!

ಲಿಂಗಾಯತರು ಬಿಜೆಪಿ ಕಛೇರಿ ಬಳಿ ಬರಬೇಡಿ - BSY ಬಳಿಕ ಕಾರ್ಯಕರ್ತರಿಗೆ ಶಾಕ್ ಕೊಟ್ಟ ನಳೀನ್ ಕುಮಾರ್ ಕಟೀಲ್..?

ನಿಗಮ ಮಂಡಳಿಗೆ ಅಧ್ಯಕ್ಷರುಗಳ ನೇಮಕ - ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊ'ಡೆದ್ರಾ ಯಡಿಯೂರಪ್ಪ.??

ಬಿಜೆಪಿಗೆ ಸೇರ್ಪಡೆಯಾದ ಕುಸ್ತಿಪಟು ಯೋಗೇಶ್ವರ್ ದತ್, ಹರಿಯಾಣದಲ್ಲಿ ಮತ್ತೆ ಬಿಜೆಪಿ ?