ಮತಾಂತರಕ್ಕೆ ಬ್ರೇಕ್ ಹಾಕಿದ ಕೇಂದ್ರ ಸರ್ಕಾರ, ಹೊಸ ನೀತಿ ಜಾರಿಗೆ !

ವಿದೇಶಗಳಿಂದ ಬಹಳ ದೊಡ್ಡ ಮೊತ್ತದ ಹಣ ನಮ್ಮ ದೇಶಕ್ಕೆ ಹರಿದು ಬರುತಿತ್ತು. ಕೆಲವು ಮಿಷನರಿಗಳು ವಿದೇಶದಿಂದ ಬಂದಂತ ದುಡ್ಡಿನಿಂದ ಬಡವರು ಮತ್ತು ಹಿಂದುಳಿದವರಿಗೆ ಹಣದ ಆಮಿಷ ತೋರಿಸಿ ಮತಾಂತರ ಮಾಡುತಿದ್ದರು. ಈ ಬಗ್ಗೆ ಕೇಂದ್ರ ಸರ್ಕಾರದ ಗಮನಕ್ಕೆ ಹಲವು ಸಂಘಟನೆಗಳು ತಂದಿದ್ದವು. ಈಗ ಕೇಂದ್ರ ಸರ್ಕಾರ ಇಂತಹ ಮಿಷನರಿಗಳ ಬುಡಕ್ಕೆ ಬೆಂಕಿ ಇಟ್ಟಂಗೆ ಹಾಗಿದೆ ಎಂದು ಹೇಳಲಾಗಿದೆ. ಇನ್ನು ಮುಂದೆ ಎನ್​ಜಿಒಗಳು ವಿದೇಶಿ ಹಣವನ್ನು ಪಡೆಯುವ ಸಂದರ್ಭದಲ್ಲಿ ಅಲ್ಲಿನ ಎಲ್ಲಾ ಉದ್ಯೋಗಿಗಳು ಮತ್ತು ಅಧಿಕಾರಿಗಳು, ಹಣಕ್ಕಾಗಿ ತಾವು ಮಂತಾಂತರ ಪ್ರಕ್ರಿಯೆಗಾಗಿ ಹಣ ನೀಡುತ್ತಿಲ್ಲ ಎಂಬುದನ್ನು ಗೃಹ ಇಲಾಖೆಗೆ ಧೃಡಪಡಿಸಬೇಕು ಎಂಬ ಹೊಸ ಕಾನೂನನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ.

ಈಗಾಗಲೇ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಕ್ಕಾಗಿ ಸುಮಾರು 18,000 ಎನ್​ಜಿಒಗಳು ವಿದೇಶಿ ಹಣ ಪಡೆಯಲು ಪರವಾನಗಿ ಕಳೆದುಕೊಂಡಿದೆ.

ಸರ್ಕಾರದ ಅಧಿಸೂಚನೆ ಪ್ರಕಾರ, ವಿದೇಶಿ ಕೊಡುಗೆ (ನಿಯಮ) ಕಾನೂನು 2011 ಬದಲಾವಣೆಯ ನಿಯಮಾನುಸಾರ ಎನ್​ಜಿಒಗಳು ಮತ್ತು ಅದರಲ್ಲಿನ ವ್ಯಕ್ತಿಗಳು ವೈಯಕ್ತಿಯವಾಗಿ 1 ಲಕ್ಷದ ಉಡುಗೊರೆ ಹಾಗೂ ಅದಕ್ಕೆ ಮೇಲ್ಪಟ್ಟ ಮೊತ್ತದ ಕೊಡುಗೆ ಪಡೆದರೆ ಅದನ್ನು ಸಚಿವಾಲಯಕ್ಕೆ ತಿಳಿಸಬೇಕು.


ಎನ್​ಜಿಒದಲ್ಲಿನ ಪ್ರತಿಯೊಬ್ಬ ಪ್ರಮುಖ ಸದಸ್ಯರಿಗೂ ಈ ನಿಯಮ ಕಡ್ಡಾಯವಾಗಿದೆ. ಹೊಸ ನಿಯಮದ ಪ್ರಕಾರ ಮತಾಂತರ ಮಾಡುವುದಾಗಲೀ, ಕೋಮುದ್ವೇಷ ಪ್ರಚೋದಿಸುವುದಾಗಲೀ ಮತ್ತು ಆತಂಕಗಳನ್ನು ಸೃಷ್ಟಿಸುವ ಕೆಲಸದಲ್ಲಿ ಎನ್​ಜಿಒಗಳು ಭಾಗಿಯಾಗುವಂತಿಲ್ಲ.

ಈ ಹಿಂದೆ ಎಫ್​ಸಿಆರ್​ಎ 2010ರ ಕಾಯ್ದೆ ಪ್ರಕಾರ, ಎನ್​ಜಿಒದಲ್ಲಿನ ನಿರ್ದೇಶಕರು ಮಾತ್ರ ಹಣ ಪಡೆಯುವ ವೇಳೆ ಈ ರೀತಿಯ ಅನುಮತಿ ಹಾಗೂ ದೃಡೀಕರಣವನ್ನು ಮಾಡಬೇಕಿತ್ತು.

ಸದ್ಯ ಇದನ್ನು ಎನ್​ಜಿಒದಲ್ಲಿನ ಪ್ರತಿಯೊಬ್ಬ ಸದಸ್ಯರು ಅನುಸರಿಸಬೇಕಿದೆ. ವಿದೇಶದಿಂದ ಬಂದ ಹಣವನ್ನು ಅನ್ಯ ವಿಚಾರಗಳಿಗೆ ಬಳಕೆ ಎಂದೂ ಮಾಡಿಲ್ಲ, ಹಿಂಸಾತ್ಮಕ ವಿಧಾನ ಪ್ರತಿಪಾದಿಸಿಲ್ಲ, ಮತಾಂತರ ಮಾಡಿಲ್ಲ ಎಂದು ಪ್ರತಿ ಸದಸ್ಯರೂ ಧೃಡೀಕರಣ ನೀಡಬೇಕು.

ಆರೋಗ್ಯ ಪರಿಸ್ಥಿತಿ ಹಿನ್ನೆಲೆ ವಿದೇಶಕ್ಕೆ ತುರ್ತು ಭೇಟಿ ನೀಡಬೇಕಾದರೂ ವಿದೇಶಿದಲ್ಲಿನ ವಾಸ್ತವ್ಯದ ಕುರಿತು ಎನ್​ಜಿಒ ಸದಸ್ಯರು ಒಂದು ತಿಂಗಳೊಳಗೆ ಮಾಹಿತಿ ನೀಡಬೇಕು ಎಂದು ಕೂಡ ಈ ಹೊಸ ನಿಯಮ ಸ್ಪಷ್ಟಪಡಿಸಿದೆ. ಈ ವೇಳೆ ಅವರ ಆರೋಗ್ಯದ ಖರ್ಚಿಗೆ ಭಾರತ ರೂಪಾಯಿಗಳಲ್ಲಿ ಎಷ್ಟು ಹಣವನ್ನು ಬಳಕೆ ಮಾಡಲಾಗುತ್ತಿದೆ ಎಂಬ ಬಗ್ಗೆ ಕೂಡ ಸ್ಪಷ್ಟಪಡಿಸಬೇಕು.

ಈ ಹಿಂದೆ ಈ ಮಾಹಿತಿಯನ್ನು ನೀಡಲು ಕೇಂದ್ರ ಸರ್ಕಾರ ಎರಡು ತಿಂಗಳ ಗಡುವು ನೀಡಿತ್ತು.

ಕಳೆದ ಐದು ವರ್ಷಗಳಲ್ಲಿ ಎನ್​ಜಿಒಗಳಿಗೆ ಹರಿದು ಬರುತ್ತಿರುವ ಹಣದ ಮೇಲೆ ಹದ್ದಿನ ಕಣ್ಣಿಟ್ಟಿರುವ ಪ್ರಧಾನಿ ನರೇಂದ್ರ ಮೋದಿ ಅನೇಕ ಕಟ್ಟು ನಿಟ್ಟಿನ ನಿಯಮ ಹಾಗೂ ಕ್ರಮಗಳನ್ನು ಜಾರಿಗೆ ತಂದಿದ್ದಾರೆ.

9 ಜನ ಲಿಂಗಾಯತ ನೌಕಕರಿಗೆ ಬಿಜೆಪಿ ಕಛೇರಿಯಿಂದ ಗೇಟ್ ಪಾಸ್!!

ಲಿಂಗಾಯತರು ಬಿಜೆಪಿ ಕಛೇರಿ ಬಳಿ ಬರಬೇಡಿ - BSY ಬಳಿಕ ಕಾರ್ಯಕರ್ತರಿಗೆ ಶಾಕ್ ಕೊಟ್ಟ ನಳೀನ್ ಕುಮಾರ್ ಕಟೀಲ್..?

ನಿಗಮ ಮಂಡಳಿಗೆ ಅಧ್ಯಕ್ಷರುಗಳ ನೇಮಕ - ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊ'ಡೆದ್ರಾ ಯಡಿಯೂರಪ್ಪ.??

ಬಿಜೆಪಿಗೆ ಸೇರ್ಪಡೆಯಾದ ಕುಸ್ತಿಪಟು ಯೋಗೇಶ್ವರ್ ದತ್, ಹರಿಯಾಣದಲ್ಲಿ ಮತ್ತೆ ಬಿಜೆಪಿ ?