ಅರಮನೆಯಲ್ಲಿ ಮೈಸೂರು ಪಾಕ್ ಹುಟ್ಟಿದ್ದು ಹೇಗೆ ಗೊತ್ತಾ..?- ಪಾಕದ ಹಿಂದಿನ ರೋಚಕ ಕಥೆ...!!

ಮೈಸೂರು ಪಾಕ್ ತಮಿಳುನಾಡಿನದ್ದು ಎಂಬ ಒಂದು ಟ್ವೀಟ್ ಸೃಷ್ಠಿಸಿದ ಸಂಚಲನ ಹಲವು ಬ್ರೇಕಿಂಗ್ ನ್ಯೂಸ್ ಗಳಿಗೆ ಕಾರಣವಾಗಿತ್ತು.ಆದರೇ ಅಸಲಿಗೆ ಮೈಸೂರು ಪಾಕ್ ಹುಟ್ಟಿದ್ದು ಹೇಗೆ, ಅದಕ್ಕೆ ಮೈಸೂರು ಪಾಕ್ ಎಂಬ ಹೆಸರು ಹೇಗೆ ಬಂತು ಎಂಬುದನ್ನ ಖ್ಯಾತ ಇತಿಹಾಸಕಾರರಾದ ಧರ್ಮೇಂದ್ರ ಕುಮಾರ್ ಅರೇನಹಳ್ಳಿ ತಮ್ಮ ಮರೆತುಹೋದ ಮೈಸೂರಿನ ಪುಟಗಳು ಕೃತಿಯಲ್ಲಿ ಆ ರಹಸ್ಯವನ್ನು ಬಿಚ್ಚಿಟ್ಟಾದಾರೆ.

ಅದು ಶ್ರೀ ನಾಲ್ವಡಿ ಕೃಷ್ಣರಾಜ ಓಡೆಯರ ಆಳ್ವಿಕೆ. ಒಂದು ದಿನ ಅಡುಗೆಮನೆಯಲ್ಲಿ ತರೇಹವಾರಿ ಭಕ್ಷಭೋಜನಗಳು ತಯಾರಾಗುತ್ತಿದ್ದವು.ಅಡುಗೆಮನೆಯ ಪ್ರಮುಖರೊಬ್ಬರಾದ ಕಾಕಾಸುರ ಮಾದಪ್ಪ ಹೊಸ ಭಕ್ಷವೊಂದನ್ನು ತಯಾರಿಸುವದರಲ್ಲಿ ಮುಳುಗಿಹೋಗಿದ್ದರು. ಈ ಸಮಯದಲ್ಲಿ ಮಹಾರಾಜರು ಅಡುಗೆಮನೆಗೆ ಬಂದಿದ್ದನ್ನು ಗಮನಿಸದೇ ತಮ್ಮ ಕೆಲಸದಲ್ಲಿ ತಾವು ತೊಡಗಿಕೊಂಡಿದ್ದರು.

ಘಮಘಮಿಸುವ ತುಪ್ಪದ ಬಾಣಲೆಯೊಳಗೆ ಯಾವುದೋ ಪದಾರ್ಥ ಕುದಿಯುತ್ತಾ ಪಾಕವಾಗಿ ಬದಲಾಗುತ್ತಿತ್ತು. ಪರಿಮಳ ಇಡೀ ಅರಮನೆಗೆ ವ್ಯಾಪಿಸುತ್ತಿತ್ತು, ಮಹಾರಾಜರು ಕೇಳಿಬಿಟ್ಟರು. "ಏನ್ಮಾಡ್ತಾ ಇದೀರಾ ಮಾದಪ್ಪ" ಅಂದ್ರು. ಅವರ ಇರುವನ್ನೇ ಗಮನಿಸಿದ ಮಾದಪ್ಪ ಒಂದು ಕ್ಷಣ ಬೆಚ್ಚಿ ಬಿದ್ದರು. ಮರುಕ್ಷಣವೇ ಸಾವರಿಸಿಕೊಂಡು "ಪಾಕ ಮಹಾಸ್ವಾಮಿ" ಎಂದು ಉತ್ತರಿಸಿದರು. "ಯಾವ ಪಾಕ ಇದು, ಎಲ್ಲಿ, ತನ್ನಿ ಇಲ್ಲಿ..ನಾವು ಅದರ ರುಚಿಯನ್ನು ಸವಿಯೋಣ" ಎಂದರು. ಅಲ್ಲಿಯೇ ಇದ್ದ ಬೆಳ್ಳಿತಟ್ಟೆಯಲ್ಲಿ ಆ ಸಿಹಿತಿನಿಸನ್ನು ಮಹಾರಾಜರಿಗೆ ಹಾಕಿಕೊಟ್ಟರು ಮಾದಪ್ಪ.

ಒಂದು ಚಮಚ ಆ ಬಿಸಿಬಿಸಿಯಾದ ಪಾಕವನ್ನು ಎತ್ತಿ ಬಾಯಿಗಿಟ್ಟುಕೊಂಡರು. ಅಷ್ಟೇ..ಕ್ಷಣಾರ್ಧದಲ್ಲಿ ಅದು ಜೇನಿನಂತೆ ಕರಗಿ ಗಂಟಲಲ್ಲಿ ಇಳಿಯಿತು. ಪರಮಾನಂದಭರಿತರಾದ ಮಹಾರಾಜರು "ಯಾವ ಪಾಕ ಇದು ಮಾದಪ್ಪ? " ಎಂದರು. ಸ್ವಲ್ಪವೂ ತಡವರಿಸದ ಮಾದಪ್ಪ ಸ್ಪಷ್ಟವಾಗಿ ಹೇಳಿದರು. "ಮಹಾಸ್ವಾಮಿ ಇದು ಮೈಸೂರುಪಾಕ" ಎಂದರು. "ಅದ್ಭುತ" ಎಂದ ಒಡೆಯರು ಎರೆಡೆರೆಡು ಭಾರಿ ಸವಿದರು.

ನಂತರ ಊಟವಾದ ಮೇಲೆ ಮಾದಪ್ಪನವರನ್ನು ಕರೆದ ಮಹಾರಾಜರು, "ಈ ಸಿಹಿಯಾದ ಮೈಸೂರು ಪಾಕವನ್ನು ನಾವೊಬ್ಬರೇ ತಿಂದರೆ ನಮಗೆ ತೃಪ್ತಿಯಾಗಲಾರದು. ಇದರ ರುಚಿಯನ್ನು ನಮ್ಮ ಪ್ರಜೆಗಳೂ ಆಸ್ವಾದಿಸಬೇಕು. ಆದುದರಿಂದ ನೀವು ಅರಮನೆಯ ಉತ್ತರದಿಕ್ಕಿನಲ್ಲಿರುವ ಅಶೋಕರಸ್ತೆಯಲ್ಲಿ ಇದಕ್ಕಾಗಿಯೇ ಒಂದು ಸಿಹಿತಿಂಡಿಯ ಅಂಗಡಿಯನ್ನು ತೆರೆಯಿರಿ. ನಮ್ಮ ಜನರಿಗೂ ಈ ಭಕ್ಷ ಸಿಗುವಂತಾಗಲಿ.

ಒಡೆಯರ ಅಪ್ಪಣೆಯಂತೆಯೇ ಮಾದಪ್ಪನವರು ಅಶೋಕಾರಸ್ತೆಯಲ್ಲಿ ಒಂದು ಸಿಹಿತಿಂಡಿಯ ಅಂಗಡಿ ತೆಗೆದೆರು. ಮೈಸೂರು ಪಾಕ ಮುಂದೆ ಮೈಸೂರು ಪಾಕ್ ಆಗಿ ನಾಡಿನಾದ್ಯಂತ ಪರಿಚಯವಾಯಿತು. ಆ ಅಂಗಡಿ ಈಗ ಮೈಸೂರಿನ ಸಯ್ಯಾಜಿ ರಾವ್ ರಸ್ತೆಯಲ್ಲಿ ಗುರು ಸ್ವೀಟ್ ಮಾರ್ಟ್ ಎಂದು ವಿರಾಜಮಾನವಾಗಿದೆ. ಮಾದಪ್ಪನವರ ಮೊಮ್ಮಕ್ಕಳು ಈಗ ಅದನ್ನು ಯಶಸ್ವಿಯಾಗಿ ನಿರ್ವಹಿಸಿಕೊಂಡು ಬರುತ್ತಿದ್ದಾರೆ.

ಇದು ಮೈಸೂರು ಪಾಕ್ ನ ಇತಿಹಾಸ

ಮೂಲ ಲೇಖಕರು - ಧರ್ಮೇಂದ್ರ ಕುಮಾರ್ ಅರೇನಹಳ್ಳಿ

9 ಜನ ಲಿಂಗಾಯತ ನೌಕಕರಿಗೆ ಬಿಜೆಪಿ ಕಛೇರಿಯಿಂದ ಗೇಟ್ ಪಾಸ್!!

ಲಿಂಗಾಯತರು ಬಿಜೆಪಿ ಕಛೇರಿ ಬಳಿ ಬರಬೇಡಿ - BSY ಬಳಿಕ ಕಾರ್ಯಕರ್ತರಿಗೆ ಶಾಕ್ ಕೊಟ್ಟ ನಳೀನ್ ಕುಮಾರ್ ಕಟೀಲ್..?

ನಿಗಮ ಮಂಡಳಿಗೆ ಅಧ್ಯಕ್ಷರುಗಳ ನೇಮಕ - ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊ'ಡೆದ್ರಾ ಯಡಿಯೂರಪ್ಪ.??

ಬಿಜೆಪಿಗೆ ಸೇರ್ಪಡೆಯಾದ ಕುಸ್ತಿಪಟು ಯೋಗೇಶ್ವರ್ ದತ್, ಹರಿಯಾಣದಲ್ಲಿ ಮತ್ತೆ ಬಿಜೆಪಿ ?